ಬನ್ನಿ, ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಕಲಬುರಗಿಯ ಬೆಳವಣಿಗೆಯನ್ನು ಮುನ್ನಡೆಸೋಣ

ಪ್ರಾರಂಭಿಸಿ

ನಮ್ಮ ವಿಶೇಷತೆ

ಡಿಜಿಟಲ್ ಕಲಬುರಗಿಯಲ್ಲಿನ ಪರಿಣತಿಯು ಅಂತರ್ಜಾಲದಲ್ಲಿ ನಿಮ್ಮ ಬಲವಾದ ಉಪಸ್ಥಿತಿ ಮತ್ತು ಪರಿಹಾರಗಳನ್ನು ನಿರ್ಮಿಸಲು ನಿಮಗೆ ಅತ್ಯಂತ ಉಪಯುಕ್ತಕಾರಿ.

ನಮ್ಮ ಆಂತರಿಕ ತಜ್ಞರು ಮತ್ತು ನಮ್ಮೊಂದಿಗೆ ಸಂಯೋಜಿತವಾಗಿರುವ ತಜ್ಞರ ತಂಡ, ವೈವಿಧ್ಯಮಯ ಶ್ರೇಣಿಯ ಅವಶ್ಯಕತೆಗಳಿಗೆ ಅತ್ಯಂತ ಸೂಕ್ತವಾದ ಪರಿಹಾರವನ್ನು ನೀಡಲು ಸಂಪೂರ್ಣವಾಗಿ ಸಕ್ಷಮರಾಗಿದ್ದರೆ.

ವೈಯಕ್ತಿಕರಿಸಿದ ಪರಿಹಾರಗಳು

ಪ್ರತಿಯೊಬ್ಬ ಗ್ರಾಹಕರ ನಿಖರವಾದ ಅವಶ್ಯಕತೆಗಳನ್ನು ಪೂರೈಸುವುದು ನಮ್ಮ ವೈಶಿಷ್ಟ್ಯತೆ ಆಗಿದೆ.

ಸಮಯ ಬದ್ಧ ಪರಿಹಾರ

ನಾವು ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತೇವೆ. ಯೋಜನೆಗಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಅವಧಿಯ ಪ್ರಕಾರ ನಮ್ಮ ಗ್ರಾಹಕರಿಗೆ ಪರಿಹಾರಗಳನ್ನು ನೀಡಲು ಯಾವಾಗಲೂ ನಾವು, ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ.

ವೆಚ್ಚ-ಪರಿಣಾಮಕಾರಿ ಪರಿಹಾರಗಳು

ಒಳಗೊಂಡಿರುವ ವೆಚ್ಚಗಳ ವಿವರವಾದ ಮತ್ತು ಪಾರದರ್ಶಕ ವಿವರಣೆಯನ್ನು ನೀಡುತ್ತೇವೆ ಮತ್ತು ಯೋಜನೆಗೆ ಅಗತ್ಯವಿಲ್ಲದ ವೈಶಿಷ್ಟ್ಯಗಳನ್ನು ತೆಗೆದುಹಾಕುವ ಮೂಲಕ ನಮ್ಮ ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡಲು ನಾವು ದೃಢವಾಗಿ ಪ್ರಯತ್ನಪಡುತ್ತೇವೆ. ನಾವು ಇದನ್ನು ಸಾಕಷ್ಟು ಸಮಗ್ರತೆ ಮತ್ತು ನೈತಿಕತೆಯೊಂದಿಗೆ ಮಾಡುತ್ತೇವೆ.

ನಮ್ಮ ಪರಿಣತಿ

ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ವೆಚ್ಚ-ಪರಿಣಾಮಕಾರಿ ಡಿಜಿಟಲ್ ಪರಿಹಾರಗಳ ವ್ಯಾಪಕ ಶ್ರೇಣಿಯನ್ನು, ಡಿಜಿಟಲ್ ಕಲಬುರಗಿ ಒದಗಿಸುತ್ತದೆ.

ನಮ್ಮ ಹತ್ತಿರ ಬಳಸಲು ಸಿದ್ಧವಾಗಿರುವ, ಇಂತಹ ವ್ಯಕ್ತಿಗಳಿಗೆ ವೆಬ್ಸೈಟ್ ಪರಿಹಾರಗಳು ದೊರಕುತ್ತವೆ: ವೃತ್ತಿಪರರು, ರಾಜಕಾರಣಿಗಳು ಮತ್ತು ಸಮಾಜದ ಪ್ರಮುಖ ವ್ಯಕ್ತಿಗಳು.
ಮತ್ತು ಈ ರೀತಿಯ ವ್ಯವಹಾರಗಳಿಗೆ: ಆಸ್ಪತ್ರೆಗಳು, ವಿವಿಧ ಸಣ್ಣ ವ್ಯಾಪಾರಗಳು, ಉಪಹಾರಗೃಹಗಳು ಮತ್ತು ವಸತಿಗೃಹಗಳು, ಪಾಲುದಾರಿಕೆಗಳು ಮತ್ತು ಸಂಸ್ಥೆಗಳು.
ಮತ್ತು ಈ ರೀತಿಯ ಸಂಸ್ಥೆಗಳಿಗೆ: ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳು ಮತ್ತು ಸೊಸೈಟಿಗಳು.

ವೆಬ್‌ಸೈಟ್ ವಿನ್ಯಾಸ

ಕಣ್ಣು-ಸೆಳೆಯುವ ಮತ್ತು ಸೊಗಸಾದ ಲೇಔಟ್‌ಗಳು, ಡೆಸ್ಕ್‌ಟಾಪ್ ಮತ್ತು ಮೊಬೈಲ್‌ನಲ್ಲಿ ರೆಸ್ಪಾನ್ಸಿವ್, ಸಾಮಾಜಿಕ ಮಾಧ್ಯಮ ಏಕೀಕರಣ, ಇ-ಕಾಮರ್ಸ್, ಆನ್‌ಲೈನ್ ಪರೀಕ್ಷೆಗಳು, ಕ್ಲೈಂಟ್ ಮ್ಯಾನೇಜ್‌ಮೆಂಟ್.

ಸಾಮಾಜಿಕ ಮಾಧ್ಯಮ ನಿರ್ವಹಣೆ

ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸೈನ್ ಅಪ್ ಮಾಡುವುದು ಮತ್ತು ಇಂಗ್ಲಿಷ್, ಕನ್ನಡ ಮತ್ತು ಹಿಂದಿಯಲ್ಲಿ ಪೋಸ್ಟ್‌ಗಳ ಮೂಲಕ ಪ್ರೇಕ್ಷಕರನ್ನು ಸೃಜನಾತ್ಮಕವಾಗಿ ತೊಡಗಿಸಿಕೊಳ್ಳುವುದು.

ಅಂತರ್ಜಾಲ ಜಾಹಿರಾತುಗಾರಿಕೆ

ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳು (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯುಟ್ಯೂಬ್) ಮತ್ತು ಇತರ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳ ಪ್ರಭಾವಿಗಳ ಮೂಲಕ ಮತ್ತು ಪ್ರತಿ ಕ್ಲಿಕ್‌ಗೆ ವೆಚ್ಚದ ಜಾಹೀರಾತುಗಳು.

ಡಿಜಿಟಲ್ ಬ್ರ್ಯಾಂಡಿಂಗ್ ತಂತ್ರ

ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಅಸ್ತಿತ್ವ ಮತ್ತು ಬ್ರ್ಯಾಂಡ್ ಅನ್ನು ನಿರ್ಮಿಸಲು ಮತ್ತು ಬೆಳೆಸಲು ಸಲಹಾ ಸೇವೆಗಳು.

ಆನ್-ಬೋರ್ಡಿಂಗ್ ಸಹಾಯ

Zomato, PhonePe, GooglePay, Instamojo, Shiprocket ಮುಂತಾದ ಡಿಜಿಟಲ್ ವ್ಯಾಪಾರ ಪರಿಹಾರಗಳಿಗೆ ಆನ್-ಬೋರ್ಡಿಂಗ್ ಸೇವೆಗಳು.

ಡಿಜಿಟಲ್ ಡಾಕ್ಯುಮೆಂಟೇಶನ್

ಪ್ರಸ್ತುತಿಗಳು, ಗ್ರಾಫಿಕ್ಸ್, ಪಠ್ಯ ದಾಖಲೆಗಳು, ರೆಸ್ಯೂಮ್‌ಗಳು ಸ್ಪ್ರೆಡ್‌ಶೀಟ್‌ಗಳು, ಮ್ಯಾಗಜೀನ್‌ಗಳು, ಡೈರಿಗಳು, ವ್ಯಾಪಾರ ಕಾರ್ಡ್‌ಗಳು, ಬ್ಯಾನರ್‌ಗಳು ಮತ್ತು ಕರಪತ್ರಗಳು.

ವಿಷಯ ರಚನೆ

ಪಠ್ಯ, ಚಿತ್ರ ಮತ್ತು ವೀಡಿಯೊ ವಿಷಯ ರಚನೆ ಇಂಗ್ಲಿಷ್, ಕನ್ನಡ ಮತ್ತು ಹಿಂದಿಯಲ್ಲಿ ಲಭ್ಯವಿದೆ.

ಭಾಷಾ ಅನುವಾದ

ನಿಮ್ಮ ಡಾಕ್ಯುಮೆಂಟ್‌ಗಳನ್ನು ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಡಿಜಿಟಲ್ ರೀತಿಯಲ್ಲಿ ಅನುವಾದಿಸಿ.

ಡಿಜಿಟಲ್ ಸಾಕ್ಷರತಾ ಕಾರ್ಯಾಗಾರಗಳು

ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ಡಿಜಿಟಲ್ ಸಾಕ್ಷರತಾ ತರಬೇತಿಯನ್ನು ಒದಗಿಸಲು ಕಾರ್ಯಾಗಾರಗಳು.

ನಮ್ಮ ಬಗ್ಗೆ

ಡಿಜಿಟಲ್ ಕಲಬುರಗಿ ಕಲ್ಯಾಣ ಕರ್ನಾಟಕ ಮತ್ತು ಭಾರತದ ಇತರ ಭಾಗಗಳಲ್ಲಿ ಡಿಜಿಟಲ್ ಪರಿಹಾರಗಳ ಮೂಲಕ ನಿಮ್ಮ ಬೆಳವಣಿಗೆಯನ್ನು ಉತ್ತೇಜಿಸಲು ನಿಮ್ಮ ವಿಶ್ವಾಸಾರ್ಹ ಡಿಜಿಟಲ್ ಪಾಲುದಾರರು.

ಅಭಿಷೇಕ್ ಉಪಳಾವಂಕರ್

ಬಿ.ಇ. (ಇ.ಸಿ.ಇ.) - ಪಿ.ಇ.ಎ.ಸ್.ಐ.ಟ್. ಸಹ ಸಂಸ್ಥಾಪಕ: IASprepkit.com & DigitalKalaburagi.in

ಭಾವನಾ ಶರ್ಮಾ

ಬಿ.ಟೆಕ್ (ಇ.ಸಿ.ಇ.) - ಜಿ.ಎನ್.ಡಿ.ಯು ಸಹ ಸಂಸ್ಥಾಪಕಿ: IASprepkit.com & DigitalKalaburagi.in

ನಮ್ಮನ್ನು ಸಂಪರ್ಕಿಸಿ

ಕೆಲಸದ ಸಮಯ: ಬೆಳಿಗ್ಗೆ ೧೦ (10) ರಿಂದ ಸಂಜೆ ೬ (6) (ಪ್ರತಿ ದಿನ)

ದೂರವಾಣಿ ಸಂಖ್ಯೆ: +೯೧ ೯೦೩೬ ೨೭೫ ೩೦೯ (+91 9036 275 309)

ಇ-ಮೇಲ್: digitalkalaburagi.info@gmail.com